Description
ಡಾ| ಡಿ.ಸಿ. ರಾಜಪ್ಪನವರು ಅಧ್ಯಯನಕ್ಕೆ ಆರಿಸಿಕೊಂಡಿರುವ ವಿಷಯ ಮತ್ತು ಕಾಲದ ಚೌಕಟ್ಟು- ಎರಡೂ ವಿಶಿಷ್ಟವಾಗಿವೆ. ಅವರು ಕೈಗಾರಿಕೆ ಮತು ಕರಕುಶಲ ಕಲೆಗಳ ಅಧ್ಯಯನವನ್ನು ಮೈಸೂರು ರಾಜ್ಯದ ಭೌಗೋಳಿಕ ಚೌಕಟ್ಟಿನೊಳಗೆ ನಡೆಸಿದ್ದಾರೆ. ಅವರು ಆರಿಸಿಕೊಂಡಿರುವ ಕಾಲಾವಧಿ ಮೈಸೂರು ರಾಜ್ಯದ ಇತಿಹಾಸದಲ್ಲಿ ವಿಶಿಷ್ಟ ಘಟ್ಟವಾಗಿದೆ. ಕ್ರಿ. ಶ. ೧೮೩೧ರಿಂದ ೧೮೮೧ರ ವರೆಗೆ ಬ್ರಿಟಿಷರ ನೇರ ಆಡಳಿತ ಮೈಸೂರು ರಾಜ್ಯದಲ್ಲಿ ನೆಲೆಸಿತ್ತು. ಕೈಗಾರಿಕೆ ಮತ್ತು ಕರಕುಶಲತೆಯ ಬೀಡಾಗಿದ್ದ ಮೈಸೂರು ಬ್ರಿಟಿಷರ ಸಂಪತ್ತಿನ ಮೂಲ ವಾಯಿತು. ಇಂತಹ ಕಾಲದಲ್ಲಿ ಕೈಗಾರಿಕೆ ಮತ್ತು ಕರಕುಶಲ ಕಲೆಗಳು ಹೇಗೆ ಬದುಕಿ ಉಳಿದಿದ್ದವು ಎಂಬುದನ್ನು ಡಾ| ಡಿ. ಸಿ. ರಾಜಪ್ಪನವರು ದಾಖಲಿಸಲು ಯತ್ನಿಸಿದ್ದಾರೆ. ಕರ್ಣಾಟಕ ರಾಜ್ಯ ಪತ್ರಾಗಾರ, ಬೆಂಗಳೂರು ಮತ್ತು ಮೈಸೂರಿನಲ್ಲಿ ದೊರಕುವ ದಾಖಲೆಗಳನ್ನು ಮತ್ತು ಇತರ ದಾಖಲೆಗಳನ್ನು ತಮ್ಮ ಸಂಶೋಧನೆಯಲ್ಲಿ ಬಳಸಿಕೊಂಡಿರುವುದು ಗಮನಾರ್ಹ ವೆಷಯ. ಈ ಆಕರಗಳೆಲ್ಲ ಇರುವುದು ಇಂಗ್ಲಿಷಿನಲ್ಲಿ. ಅವುಗಳನ್ನು ಕನ್ನಡಕ್ಕೆ ಭಾಷಾಂತರಿಸಿಕೊಂಡು, ನಂತರ ತಮ್ಮ ಸಂಶೋಧನೆಯಲ್ಲಿ ಬಳಸಿಕೊಳ್ಳಬೇಕಾಯಿತು. ಪತ್ರಾಗಾರ ಸಾಮಗ್ರಿಯನ್ನು ಬಳಸಿಕೊಂಡು ಕನ್ನಡದಲ್ಲಿ ಇಂತಹ ಸಂಶೋಧನೆ ನಡೆದಿರುವುದು ಇದೇ ಮೊದಲನೆಯದೆಂದು ಹೇಳಬಹುದು.
-ಡಾ| ಕೆ. ಎಸ್. ಶಿವಣ್ಣ
Reviews
There are no reviews yet.