Description
ರಕ್ತ ದೇಹದಿಂದ ಚಿಮ್ಮಿದ ತಕ್ಷಣವೇ ಇನ್ನೂ ಬೆಚ್ಚಗಿರುವಾಗಲೇ ರಕ್ತವನ್ನು ದೃಷ್ಟಿಯಿಟ್ಟು ನೋಡಬೇಕು. ಆ ರಕ್ತದಲ್ಲಿ ಭವಿಷ್ಯ ಕಾಣುತ್ತೆ. ರಕ್ತದಲ್ಲಿ ಕಾಣದೇ ಇದ್ದುದು ಪರಸ್ಪರರ ಕಣ್ಣುಗಳ ಮಿಂಚಲ್ಲಿ…– ಪ್ರೊ| ಡೇನಿಯೆಲ್ (ಪುಟ ೫೦)ಬಾಣ ಅರ್ಧ ಬರೆದಿದ್ದ ಕಾದಂಬರಿಯನ್ನು ಅವನ ಮಗ ಭೂಷಣ ಮುಂದುವರೆಸಿದನಂತೆ. ಮಾಸ್ತಿಯವರ ಅಲಿಖಿತ ಕತೆಗಳನ್ನು ಸತ್ಯನಾರಾಯಣ ಈಗ ಬರೆಯುತ್ತಿದ್ದಾರೇನೋ ಅನ್ನಿಸುತ್ತದೆ. ಇಲ್ಲಿಯ ಕತೆಗಳು ಪ್ರಗತಿಯ ಧಾವಂತದಲ್ಲಿರುವನಮ್ಮ ಕಾಲದ, ಸಮಾಜದ ಬಿಕ್ಕಟ್ಟುಗಳನ್ನು ಸೂಕ್ಷ್ಮವಾಗಿ ಗಮನಿಸಿ ವ್ಯಾಖ್ಯಾನಿಸುತ್ತವೆ.– ಮುರಳೀಧರ ಉಪಾಧ್ಯ ಹಿರಿಯಡಕಸತ್ಯನಾರಾಯಣರ ಕಣ್ಣ ಕನ್ನಡಿಯಲ್ಲಿ ಹೊಳೆದ ಬಿಂಬಗಳು ಹಲವಾರು. ವರ್ತಮಾನದ ಬದುಕಿನ ಕಟು ವಾಸ್ತವತೆಯಅರಿವಿನಿಂದ ಹುಟ್ಟಿಕೊಂಡ ಗಾಢವಾದ ವಿಷಾದ ಹಾಗೂ ಅದರ ಮಧ್ಯೆಯೂ ಮೊಳಕೆಯೊಡೆಯುತ್ತಿರುವ ಜೈವಿಕ ಚಲನಶೀಲ ಸಂಬಂಧಗಳ ಬಗೆಗಿನ ಆಶಾವಾದ ಇವರ ಕತೆಗಳ ಪ್ರಧಾನ ಸಾಧನೆಯಾಗಿದೆ.– ಡಾ| ಕೆ. ರಘುನಾಥ್‌ತಮ್ಮ ವಸ್ತು, ಚಿಂತನೆಗಳ ಬಹುರೂಪತೆ ಹಾಗೂ ಕಥಾಶೋಧದ ನಿಷ್ಠೆ — ಇವುಗಳ ಮೂಲಕ ಸತ್ಯನಾರಾಯಣರ ಕತೆಗಳು ವಿಭಿನ್ನ ಕಾಲ-ಸನ್ನಿವೇಶಗಳಲ್ಲಿ ಹಲವು ಬಗೆಯ ಓದಿಗೆ ನಮ್ಮನ್ನು ಪ್ರಚೋದಿಸಬಲ್ಲ ಶಕ್ತಿ ಪಡೆದಿವೆ. ಕತೆಗಳನ್ನು ಹೇಳುವ ಮೂಲಕ ಜೀವನದರ್ಶನ ಪಡೆಯುವ ಜರೂರಿನಲ್ಲಿ ಇವರು ಬರೆಯುತ್ತಿದ್ದಾರೆ.– ಕೆ.ಫಣಿರಾಜ್ (ಮುನ್ನುಡಿಯಲ್ಲಿ)ಇವು ಈವತ್ತಿನ ತಹತಹದ ಕತೆಗಳು.
-ಡಿ.ಎಸ್. ನಾಗಭೂಷಣ
Reviews
There are no reviews yet.