Description
ಜೀವನದ ಮುಖ್ಯ ಕರ್ತವ್ಯ ಮುಗಿದ ಮೇಲೆ ಹಿರಿಯ ಜೀವವೊಂದು ಜಗಲಿಯಲ್ಲಿ ಮನೆ ಮಂದಿಯೊಂದಿಗೆ, ತನ್ನ ಸಂದಕಾಲದ ಮಾಯೆಯನ್ನು ಮೆಲುಕುವಂತೆ ಸುರುವಾಗುವ ಈ ಕೃತಿಯಲ್ಲಿ ಇವೆಲ್ಲ ಅವಿಭಾಜ್ಯವಾಗಿ ಅಂಟಿ ಬಂದಂತೆ, ಅಸಂಗತವೆನ್ನಿಸದಂತೆ, ಮುಂದಣ ಪೀಳಿಗೆಗಳಿಗೆ ದಾಟಿಸುವ ಸಿರಿ ಅರಿವಿನಂತೆ ಪ್ರಸ್ತಾಪವಾಗಿದೆ. ಇದರಿಂದಾಗಿ ಕೃತಿಗೆ ಅದರದೇ ಆದ ಅಸ್ಮಿತೆಯೂ ಪ್ರಾಪ್ತವಾಗಿದೆ. ಮತ್ತು ಇದು ಸುತರಾಂ ಒಬ್ಬ ಪುರುಷ ಬರೆಯಬಹುದಾದ ಬರವಣಿಗೆಯೇ ಅಲ್ಲ ಆಗಿಸಿದೆ.
– ವೈದೇಹಿ
ಒಂದು ಊರಿನಲ್ಲಿ ಬದುಕಿ ಬಾಳಿದ ಲೇಖಕಿಯ ಸ್ಮೃತಿಚಿತ್ರ, ಹಾಗೆಯೇ ಒಂದು ಸಮುದಾಯದ ಆಹಾರ ಪದ್ಧತಿಯನ್ನು ಕುರಿತ ಪಾಕಶಾಸ್ತ್ರದ ಕೈಪಿಡಿ. ಹೀಗೆ, ಲೇಖಕಿಯು ತನ್ನ ಬಾಲ್ಯದ ಸ್ಮೃತಿಗಳನ್ನು ಹಾಗೂ ತನ್ನ ಸಮುದಾಯದ ವಿಶಿಷ್ಟ ಖಾದ್ಯಗಳ ತಯಾರಿಕೆಯ ವಿವರಗಳನ್ನು ಒಂದು ಹದದಲ್ಲಿ ಬೆರೆಸಿ ಈ ಕಥನವನ್ನು ಕಟ್ಟಿಕೊಟ್ಟಿದ್ದಾರೆ.
– ಸಿ.ಎನ್. ರಾಮಚಂದ್ರನ್
‘ಊರೆಂಬ ಉದರ’ ಉದರಕ್ಕೆ ಸುಗ್ರಾಸಭೋಜನ! ಮನಕ್ಕೆ ಆಪ್ಯಾಯಮಾನ ಮಾಹಿತಿಪೂರ್ಣ, ರಸಪೂರ್ಣ, ಮಹತ್ವಪೂರ್ಣಕೃತಿ.
– ಮಾಲತಿ ಶರ್ಮಾ
ಪುಸ್ತಕದಲ್ಲಿನ ವ್ಯಕ್ತಿಚಿತ್ರಣಗಳು ನನಗೆ ಗೊರೂರ ರಾಮಸ್ವಾಮಿ ಅಯ್ಯಂಗಾರರನ್ನು ನೆನಪಿಸಿಕೊಳ್ಳುವಂತೆ ಮಾಡುತ್ತವೆ. ಈ ಕಥಾನಕದಲ್ಲಿ ಚರಿತ್ರೆ, ಸಮಾಜಶಾಸ್ತ್ರ ಹಾಗೂ ಆಹಾರ ತಯಾರಿಕೆಗೆ ಸಂಬಂಧಪಟ್ಟ ‘ರಸಾ’ಯನ ಶಾಸ್ತ್ರ ಎಲ್ಲವನ್ನೂ ಕಾಣಬಹುದಾಗಿದೆ.
– ಎಂ. ಶ್ರೀಧರಮೂರ್ತಿ







Reviews
There are no reviews yet.