Sold out!

ಕುವೆಂಪುಗೆ ಪುಟ್ಟ ಕನ್ನಡಿ

SKU: 209
Category: , , , ,

80.00

Out Of Stock
Weight 0.00000000 g
Number of pages

64

Year of Publication

1st Edition- 1995, 2nd Edition- 2021

Author

ಕೆ.ವಿ. ಸುಬ್ಬಣ್ಣ

eBook

https://play.google.com/store/books/details/K_V_Subbanna_Kuvempuge_Putta_Kannadi?id=yL3yDwAAQBAJ

Sold out!

Description

ಕೆ.ವಿ. ಸುಬ್ಬಣ್ಣನವರ ‘ಕುವೆಂಪುಗೆ ಪುಟ್ಟ ಕನ್ನಡಿ’ ಅನೇಕ
ದೃಷ್ಟಿಗಳಿಂದ ವಿಶಿಷ್ಟವಾದ ಪುಸ್ತಕ. “ನನ್ನ ಕಣ್ಣು ಹರಳ ಕಿರುಕನ್ನಡಿಯಲ್ಲಿ ಬಿಂಬಿಸಿದ
ಕುವೆಂಪುರ ಚಿತ್ರ ಚೂರುಗಳನ್ನು ಇಲ್ಲಿ ಪೋಣಿಸುತ್ತ ಬಂದಿದ್ದೇನೆ” – ಎಂದು ಲೇಖಕರು
ಹೇಳಿದ್ದಾರೆ. ಈ ಚಿತ್ರ ಚೂರುಗಳಲ್ಲಿ ಈವರೆಗೆ ಬೇರೆಡೆಗೆ ಮೂಡಿಬರದ ಕುವೆಂಪು ಅವರ
ವ್ಯಕ್ತಿತ್ವ ಮತ್ತು ಸಾಹಿತ್ಯದ ಅನನ್ಯ ಚಿತ್ರ ಮೂಡಿಬಂದಿದೆ. ಚಿಕ್ಕ ಕ್ಯಾನ್ವಾಸಿನಲ್ಲಿ
ಸಮಗ್ರತೆಯನ್ನು ಅರಳಿಸಿದ್ದು ಅದ್ಭುತ ಮತ್ತು ಅಷ್ಟೇ ಕಲಾತ್ಮಕವಾದುದು. ‘ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮಗಲ – ಕರಸ್ಥಲಕ್ಕೆ ಬಂದು ಚಳುಕಾದಿರಯ್ಯಾ’ ಎಂಬ ವಚನ ನೆನಪಾಗುತ್ತದೆ.

ಇದು ಡೈರಿಯಲ್ಲ; ವಿನೂತನ ಬರವಣಿಗೆ. ಹರಿಗಡೆಯದೆ ರೂಪುಗೊಳ್ಳುತ್ತ ಬರುವ ಹಾರಕ್ಕೆ ಅಲ್ಲಲ್ಲಿ ಸೌಂದರ್ಯವರ್ಧನೆಗೆ ಕಟ್ಟಿದ ಹವಳಗಳಂತೆ ವಾರಗಳು ನಮೂದಾಗಿವೆ.

ಕುವೆಂಪು
ಬದುಕು-ಬರಹದ ಅನೇಕ ಹೊಸ ವಿಚಾರಗಳೂ ಒಳನೋಟಗಳೂ ಇಲ್ಲಿವೆ. ಇದು ಆತ್ಮೀಯ ಬರಹವೂ ಹೌದು,
ವಿಶ್ಲೇಷಣೆಯೂ ಹೌದು, ವಿಮರ್ಶೆಯೂ ಹೌದು. ೨೦ನೆಯ ಶತಮಾನದಲ್ಲಿ ಭಾರತದಲ್ಲಿ ಜಾಗತಿಕ
ವಿಚಾರಗಳಿಗೆ, ಹೋರಾಟಗಳಿಗೆ, ಜನಪರ ನಿಲುವುಗಳಿಗೆ ಕುವೆಂಪು ನೀಡಿದ ಕೊಡುಗೆಯ ಸ್ಪಷ್ಟ
ತಿಳುವಳಿಕೆ ನಾವು ಮೊದಲಿಗೆ ಪಡೆಯುವುದು ಸುಬ್ಬಣ್ಣನವರ ಈ ಪುಸ್ತಕದಲ್ಲಿಯೇ.

– ಶಾಂತರಸ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಕಟಣೆಯ ಮುನ್ನುಡಿಯಿಂದ

Reviews

There are no reviews yet.

Be the first to review “ಕುವೆಂಪುಗೆ ಪುಟ್ಟ ಕನ್ನಡಿ”

Your email address will not be published. Required fields are marked *

No Author Found