Description
ಕಳೆದ ಮೂರು ದಶಕಗಳಿಂದ ಕನ್ನಡ ಪುಸ್ತಕಲೋಕವನ್ನು ಸತತವಾಗಿ ಅವಲೋಕಿಸುತ್ತ ಬಂದಿರುವ ಟಿ ಪಿ.ಅಶೋಕ ಅವರು ೨೦೦೮-೨೦೧೦ರ ಅವಧಿಯಲ್ಲಿ ಬರೆದ ತೊಂಬತ್ತು ಪುಸ್ತಕಗಳ ಕಿರುವಿಮರ್ಶೆಗಳು ಇಲ್ಲಿ ಸಂಕಲಿತವಾಗಿವೆ. ಅಶೋಕರ ಈ ಪುಸ್ತಕ ಸಮಯವು ಕಳೆದ ನಾಲ್ಕೆ ದು ವರ್ಷಗಳಲ್ಲಿ ಪ್ರಕಟವಾಗಿರುವ ಹಿರಿಯ-ಕಿರಿಯ ಲೇಖಕರ ಮಹತ್ವದ ಪುಸ್ತಕಗಳನ್ನು ಒಳಗೊಂಡಿದ್ದು ಸಮಕಾಲೀನ ಕನ್ನಡ ಬರವಣಿಗೆಯ ಆಶಯ ಮತ್ತು ಸ್ವರೂಪಗಳನ್ನು ತೆರೆದು ತೋರಿಸುವಂತಿದೆ. ಆಯಾ ಪುಸ್ತಕದ ಹೂರಣವನ್ನು ಅನಾವರಣಗೊಳಿಸುತ್ತಲೇ, ಒಟ್ಟಾರೆ ಕನ್ನಡ ಪುಸ್ತಕ ಪರಿಸರದೊಂದಿಗೆ ಆಯಾ ಕೃತಿಯು ಸೃಷ್ಟಿಸಿಕೊಳ್ಳುವ ಸಂಬಂಧಗಳನ್ನು ಸೂಚಿಸುವುದು ಈ ಪುಸ್ತಕದ ವೈಶಿಷ್ಟ ವಾಗಿದೆ.
ವಿಮರ್ಶೆಯ ಪರಿಭಾಷೆಗಳ ಭಾರದಿಂದ ನಮ್ಮನ್ನು ಮುಕ್ತರನ್ನಾಗಿಸಿ ಆಪ್ತವೆನಿಸುವ ಸರಳವಾದ ಮಾತುಗಳ ಮೂಲಕವೇ ಕೃತಿಯ ಸೂಕ್ಷ ರಸಾಸ್ವಾದಕ್ಕೆ ಅನುವು ಮಾಡಿಕೊಡುವ,
ಅದರ ಸಾಮಾಜಿಕ-ಸಾಂಸ್ಕ ತಿಕ ಮಹತ್ವವನ್ನು ಕಾಣಿಸುವ, ಕೃತಿಯೊಳಗಣ ಕಥನವನ್ನು ಹೊರಲೋಕದ ವಿಶಾಲವಾದ ಕಥನಗಳೊಂದಿಗೆ ಬೆಸೆಯುವ ಅಶೋಕರ ವಿಮರ್ಶಾ ವಿವೇಕವು
ಈ ಬರಹಗಳ ಹಿಂದೆ ಕೆಲಸ ಮಾಡಿದೆ.
ಸಾಹಿತ್ಯದ ಮೊದಲ ಓದುಗರಿಗೆ ಉಪಯುಕ್ತವಾಗಬಲ್ಲ, ಕನ್ನಡ ವಿಮರ್ಶೆಗೆ ಅರ್ಥಪೂರ್ಣವಾದುದನ್ನು ಕೂಡಿಸಬಲ್ಲ, ಸಹ ಲೇಖಕರನ್ನು ಹೊಸ ಜಿಜ್ಞಾಸೆಗಳಿಗೆ ಆಹ್ವಾನಿಸಬಲ್ಲ ಬರವಣಿಗೆ ಇಲ್ಲಿದೆ.
Reviews
There are no reviews yet.