Description
ದಿ| ಕೆ.ವಿ. ಸುಬ್ಬಣ್ಣನವರು ೧೯೯೮ರಲ್ಲಿ, ನೀನಾಸಮ್ ತಂಡದ ಪ್ರಯೋಗಕ್ಕಾಗಿ ಠಾಕೂರರ ‘ರಕ್ತ ಕರಬೀ’ ನಾಟಕವನ್ನು ‘ಕೆಂಪು ಕಣಗಿಲೆ’ ಎಂದೂ ೨೦೦೪ರಲ್ಲಿ ನೀನಾಸಮ್ ತಿರುಗಾಟದ ಪ್ರಯೋಗಕ್ಕಾಗಿ ‘ರಾಜಾ ಓ ರಾಣಿ’ ನಾಟಕವನ್ನು ‘ರಾಜ ಮತ್ತು ರಾಣಿ’ ಎಂದೂ ಕನ್ನಡೀಕರಿಸಿದ್ದರು.
ಅವೆರಡೂ ಅನುವಾದಗಳನ್ನೂ ಈಗ ಸಣ್ಣಪುಟ್ಟ ಪರಿಷ್ಕಾರಗಳೊಂದಿಗೆ ಇಲ್ಲಿ ಪ್ರಕಟಿಸಲಾಗುತ್ತಿದೆ. ಮೇಲೆ ಉಲ್ಲೇಖಿಸಿದ ಪ್ರಯೋಗಗಳ ಸಂದರ್ಭದಲ್ಲಿ ಈ ನಾಟಕಗಳನ್ನು ಕುರಿತು ಪ್ರಕಟವಾದ ಟಿಪ್ಪಣಿಗಳೂ ಅನುಬಂಧದಲ್ಲಿ ಸೇರಿವೆ.
ರಂಗಭೂಮಿಯ ಮೇಲೆ ತರುವುದಕ್ಕಾಗಿಯೇ ತಯಾರಾದ ಈ ಕನ್ನಡ ರೂಪಗಳು ರಂಗಾಸಕ್ತರನ್ನೂ ಮತ್ತು ಸಾಹಿತ್ಯದ ವಿದ್ಯಾರ್ಥಿಗಳನ್ನೂ ಆಕರ್ಷಿಸಲೆಂದು ನಮ್ಮ ಹಂಬಲ.
Reviews
There are no reviews yet.