ಉಲಿಯ ಉಯ್ಯಾಲೆ

Category: , , , , ,

170.00

90 In Stock
Weight 191 g
Number of pages

168

Year of Publication

2022

Author

ರಾಧಾಕೃಷ್ಣ ಕಲ್ಚಾರ್

eBook

https://play.google.com/store/books/details/Radhakrishna_Kalchar_Uliya_Uyyaale?id=FQS6EAAAQBAJ

90 in stock

Description

ಕೂಡುವ ಭಂಗಿಯಿಂದ ತೊಡಗಿ ಕೊಡುವ ವ್ಯಾಖ್ಯಾನದವರೆಗೂ ತಮ್ಮದೇ ವಿಶೇಷ ಛಾಪನ್ನು ರೂಪಿಸಿಕೊಂಡ ತಾಳಮದ್ದಲೆಯ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರು ತಮ್ಮ ಕಲಾಯಾತ್ರೆಯ ಹಲವು ನೋಟಗಳನ್ನು ಈ ಬರಹದಲ್ಲಿ ಚಿತ್ರಿಸಿದ್ದಾರೆ. ಒಂದು ಕಡೆಯಿಂದ ಇದು ಕಲಾವಿದನೊಬ್ಬನ ಆತ್ಮಕಥನ – ಹಳ್ಳಿಯ ಸಾದಾ ಹುಡುಗನೊಬ್ಬ ಪುರಾಣದ ಪಾತ್ರವಿಸ್ಮಯಗಳಿಂದ ಮರುಳಾಗಿ ಸತತ ವ್ಯವಸಾಯದ ಮುಖಾಂತರ ಈ ಜಿಜ್ಞಾಸೆಯ ಮಾಧ್ಯಮಕ್ಕೆ ಪ್ರವೇಶ ಪಡೆದ ವೃತ್ತಾಂತ ಇಲ್ಲಿದೆ. ಇನ್ನೊಂದೆಡೆ, ಇದು ಆ ಮಾಧ್ಯಮದ ಒಳಗಿನ ಕಥನ – ಅರ್ಥಧಾರಿಯೊಬ್ಬ ತನ್ನ ಸಂಪ್ರದಾಯದೊಳಗೆ ಸಿಕ್ಕ ಹಿರಿಕಿರಿಯರ ವೈವಿಧ್ಯಮಯ ಮಾರ್ಗಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ, ಅವರೊಂದಿಗಿನ ಕೊಡುಕೊಳೆಯ ಸಂಬಂಧದೊಳಗೆ ತನ್ನ ರೂಪುರೇಷೆಗಳನ್ನು ನಿರ್ಮಿಸಿಕೊಂಡ ಶೈಕ್ಷಣಿಕ ಕಥೆಯೂ ಇಲ್ಲಿದೆ. ಇಷ್ಟರ ಮೇಲೆ, ನಾಲ್ಕೇ ಜಿಲ್ಲೆಗಳನ್ನೊಳಗೊಂಡ ಪುಟ್ಟ ಪ್ರಾಂತ್ಯವೊಂದು ಈ ಜಗತ್ತಿನಲ್ಲಿಯೇ ವಿಶಿಷ್ಟವಾದ ಹೊಸ ಬಗೆಯ ರಂಗಮಾಧ್ಯಮವೊಂದನ್ನು ಹೇಗೆ ಬೆಳೆಸಿ ಉಳಿಸಿಕೊಳ್ಳುತ್ತಿದೆ ಎಂಬ ಕಲಾ ಇತಿಹಾಸದ ಪರೋಕ್ಷ ಕಥಾನಕವೂ ಈ ಪುಸ್ತಕದೊಳಗಿದೆ. ಹಾಗಿರುವುದರಿಂದ ಇದು ತಾಳಮದ್ದಲೆಯ ಒಳಗಿನವರಿಗೂ ಹೊರಗಿನವರಿಗೂ ರಂಗಭೂಮಿಯ ಹಿರಿಯರಿಗೂ ಕಿರಿಯರಿಗೂ ಸಾಂಸ್ಕೃತಿಕ ಕುತೂಹಲಿಗಳಿಗೂ ವಿದ್ವಾಂಸರಿಗೂ ಉಪಯುಕ್ತವಾಗಬಲ್ಲ ಹೊತ್ತಿಗೆ.

– ಅಕ್ಷರ ಕೆ.ವಿ.

Reviews

There are no reviews yet.

Be the first to review “ಉಲಿಯ ಉಯ್ಯಾಲೆ”

Your email address will not be published. Required fields are marked *

Radhakrishna Kalchar

ಹುಟ್ಟಿದ ಊರು ಸುಳ್ಯತಾಲೂಕಿನ ಪಂಬೆತ್ತಾಡಿ ಗ್ರಾಮ. ಇಸವಿ ೧೯೬೫. ತಾಯಿ ತಂದೆ ಕನಕಲಕ್ಷ್ಮಿ, ಕೇಶವ ಭಟ್ಟ. ಮೂರು ದಶಕಗಳಿಂದ ತಾಳಮದ್ದಲೆಯಲ್ಲಿ ಸಕ್ರಿಯ. ಯಕ್ಷಗಾನ ವಲಯದ ಉದ್ದಗಲಕ್ಕೂ ಬೇಡಿಕೆಯ ಅರ್ಥಧಾರಿ. ಯಕ್ಷಗಾನ ವೇಷಧಾರಿಯಾಗಿ ಅನುಭವ. ಪತ್ರಕರ್ತನಾಗಿ, ಉಪನ್ಯಾಸಕನಾಗಿ ಸದ್ಯ ಸ್ವಯಮ್ ನಿವೃತ್ತ. `ಕೂಡುಮನೆ' (ಕಾದಂಬರಿ) `ಪರಕಾಯ ಪ್ರವೇಶ', ಅವರವರ ದಾರಿ (ಕಥಾಸಂಕಲನ), ಆ ಲೋಚನ (ಅಂಕಣ ಬರೆಹ), ಮೂಡಂಬೈಲು ಶಾಸ್ತ್ರಿ (ವ್ಯಕ್ತಿ ಚಿತ್ರ) - ಪ್ರಕಟಿತ ಕೃತಿಗಳು. ತರಂಗ, ತುಷಾರ ಪತ್ರಿಕೆಗಳಲ್ಲಿ ಅಂಕಣಕಾರ. ಸದ್ಯ ಹೊಸದಿಗಂತ ಪತ್ರಿಕೆಯಲ್ಲಿ ಆ ಲೋಚನ ಹಾಗೂ ಉತ್ಥಾನ ಪತ್ರಿಕೆಯಲ್ಲಿ ಪರಕಾಯ ಪ್ರವೇಶ ಅಂಕಣಗಳು ಪ್ರಕಟವಾಗುತ್ತಿದೆ. ಯಕ್ಷಗಾನ ಪಠ್ಯ ಪುಸ್ತಕ ಸಮಿತಿ ಸದಸ್ಯ, ಸಿರಿಬಾಗಿಲು ಪ್ರತಿಷ್ಠಾನದ ಅರ್ಥಾಂತರಂಗ ಸರಣಿ ಪ್ರಾತ್ಯಕ್ಷಿಕೆಗಳ ನಿರ್ದೇಶಕ. ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ.