Description
ಇವತ್ತು ಕನ್ನಡದಲ್ಲಿ ಹೊಸತಾಗಿ ಕವನಗಳನ್ನು ಬರೆಯುತ್ತಿರುವವರ ನಡುವೆ ನೋಡಿದರೆ, ಸಮುದ್ಯತಾ ವೆಂಕಟರಾಮು ಅವರು ತುಸು ಪ್ರತ್ಯೇಕವಾಗಿ ನಿಂತು ಗೋಚರಿಸುತ್ತಾರೆ. ಮೊದಲನೆಯದಾಗಿ, ಅವರ ಕವನಗಳ ವಸ್ತು ಬಹುತೇಕ ಪುರಾಣಗಳ ಕಥೆ-ಪಾತ್ರ-ಸನ್ನಿವೇಶಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವಂಥದ್ದು, ಭಾಷೆಯೂ ಅದಕ್ಕೆ ಸಂವಾದಿಯಾಗಿರುವಂಥದ್ದು. ಇನ್ನು, ಪುರಾಣೇತರ ವಿಚಾರಗಳನ್ನು ಮಾತಾಡುವಾಗಲೂ ಅವರ ಸಂವೇದನೆ ಇವತ್ತಿನ ಸಂಗತಿಗಳಿಗಿಂತ ಹೆಚ್ಚಾಗಿ ಪುರಾಣಗಳ ಸ್ತರಕ್ಕೆ ಸೇರುವ ಬೇರೆಯೇ ಬಗೆಯ ವಾಸ್ತವದ್ದು. ಇಲ್ಲಿಯ ಕವನಗಳು ಒಂದೊಂದೇ ಭಾವದ ಎಳೆ ಹಿಡಿದು ಅದರೊಳಗೇ ಕುಸುರಿ ಕೆಲಸ ಮಾಡುತ್ತ ತನ್ನತನವನ್ನು ಮೀರಿ ರಸದ ಅಲೌಕಿಕದ ಕಡೆಗೆ ತುಡಿಯುವ ಪ್ರಯತ್ನ ಮಾಡುತ್ತವೆ. ತಮ್ಮ ಎರಡನೆಯ ಕವಿತಾ ಸಂಕಲನದಲ್ಲಿಯೇ ಲೇಖಕಿ ಇದುವರೆಗೆ ಸಾಗಿರುವ ದೂರ ಗೋಚರಿಸುವಂತಿದೆ, ಮುಂದಿನ ಅವರ ಹಾದಿಯ ಬಗ್ಗೆ ನಾವು ನಿರೀಕ್ಷೆಯಲ್ಲಿ ಕಾಯುವಂತಿದೆ.
– ಅಕ್ಷರ ಕೆ.ವಿ.
Reviews
There are no reviews yet.