Description
ಸ್ವಪರಂಪರೆಯನ್ನವಲಂಬಿಸದ ಬೆಳವಣಿಗೆ ಸಹಜವಾಗದು, ಸುಷ್ಠುವಾಗದು. ಅಂತೆಯೇ, ಲಲಿತಕಲಾಶಾಸ್ತ್ರದ ನಮ್ಮ ಪೂರ್ವಪರಂಪರೆಯನ್ನು ತಿಳಿದಲ್ಲದೆ ನಮಗೆ ಇಂದು ಅಗತ್ಯವಾದ ನೂತನ ಕಲಾಶಾಸ್ತ್ರ, ಸಹಜ ಅರಳಿದಂತೆ, ಹುಟ್ಟಿ ಬೆಳೆಯಲಾರದು. ನಾಟ್ಯ ಕಲೆಯ ವಿಷಯವನ್ನು ತೆಗೆದುಕೊಂಡರೂ ಅಷ್ಟೆ: ನಮ್ಮಲ್ಲಿ ಈ ಶತಮಾನದ ನೂತನ ನಾಟ್ಯಶಾಸ್ತ್ರ ಹುಟ್ಟಿ ಬೆಳೆಯಬೇಕಾದರೆ ಮೊದಲಿಗೆ ನಮ್ಮ ಭಾರತೀಯ ನಾಟ್ಯಶಾಸ್ತ್ರದ ಪರಂಪರೆ ಸ್ಪಷ್ಟ ತಿಳಿಯಬೇಕು. ಮುಖ್ಯವಾಗಿ, ಸಂಸ್ಕೃತದಲ್ಲಿರುವ ನಾಟ್ಯವಿಷಯಕ ಗ್ರಂಥಗಳೆಲ್ಲವೂ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದವಾಗಬೇಕು. ಸಂಸ್ಕೃತದ ನಾಟ್ಯಶಾಸ್ತ್ರಗ್ರಂಥಗಳಲ್ಲಿ ಮುಖ್ಯ ಒಂದಾದ ‘ದಶರೂಪಕ’ವನ್ನು ಅನುವಾದಿಸಿ ಪ್ರಕಟಿಸುವುದರಲ್ಲಿ ಮೇಲಿನ ಪ್ರಯೋಜನದ ದೃಷ್ಟಿಯೊಂದಿದೆ. ಜೊತೆಗೆ, ಅದಕ್ಕಿಂತ ಇನ್ನೊಂದು ಪ್ರಯೋಜನವೂ ಈ ಪ್ರಕಟಣೆಯಲ್ಲಿ ಲಕ್ಷ ವಾಗಿದೆ: ಜ್ಞಾನೇಚ್ಛುಗಳಿಗೆ ಇಂಥ ಗ್ರಂಥಗಳು ವೇದೋಪವಸತಿಯನ್ನು ಕಲ್ಪಿಸಿಕೊಡುತ್ತವೆಂಬುದು. ಪ್ರಾಯಃ, ಮೂಲಗ್ರಂಥಕಾರ ಉದ್ದೇಶಿಸಿದ ಪ್ರಯೋಜನ ಕೂಡ ಇಂಥದೇ.
Reviews
There are no reviews yet.