Description
ವಸಾಗತುಶಾಹಿ, ವಸಾಹತುಪ್ರಜ್ಞೆ ಮತ್ತು ನಿರ್ವಸಾಹತೀಕರಣ- ಈ ಮೊದಲಾದ ವಿಚಾರಗಳು ಕಳೆದ ಹಲವಾರು ವರ್ಷಗಳಿಂದ ಕನ್ನಡದಂಥ ಭಾಷೆಗಳಲ್ಲಿ ಚರ್ಚೆಗೊಳಗಾಗುತ್ತಿವೆ. ಆದರೆ, ಈ ಚರ್ಚೆಗಳಲ್ಲಿ ಅಡಗಿರುವ ಪ್ರಮುಖ ಅಪಾಯ- ಹಲವೊಮ್ಮೆ ವಸಾಹತೀಕರಣಗೊಂಡ ಚೌಕಟ್ಟುಗಳಿಂದಲೇ ಪ್ರೇರಿತವಾಗಿ, ಅವೇ ಸಿದ್ಧಾಂತಗಳನ್ನಾಧರಿಸಿ ಈ ಚರ್ಚೆಗಳು ನಡೆಯುವುದು. ಅಂಥ ಹಾದಿಯಿಂದ ಹೊರಬಂದು ಬೇರೆಯೇ ದಿಕ್ಕಿನಿಂದ ವಸಾಹತೀಕರಣದ ಪ್ರಕ್ರಿಯೆಯನ್ನು ಶೋಧಿಸುವ ಕೆಲಸವನ್ನೀಗ ಬಾಲಗಂಗಾಧರ ಅವರು ನಡೆಸುತ್ತಿದ್ದಾರೆ. ಅಂಥ ವಿಚಾರಧಾರೆಯನ್ನು ಮಂಡಿಸುವ ಅವರ ದೀರ್ಘಲೇಖನವೊಂದರ ಕನ್ನಡಾನುವಾದ ಇಲ್ಲಿ ಸಂಕಲಿತಗೊಂಡಿದೆ. ಸಮಾಜಶಾಸ್ತ್ರ, ಸಂಸ್ಕೃತಿ ಅಧ್ಯಯನ ಮತ್ತು ನಾಗರಿಕತೆಗಳ ತುಲನೆ- ಮೊದಲಾದ ವಿಷಯಗಳಲ್ಲಿ ಆಸಕ್ತರಾದ ವಿದ್ವಾಂಸರು ಮತ್ತು ಆಸಕ್ತರು ಓದಲೇಬೇಕಾದ ಪುಸ್ತಕ ಇದು.
Reviews
There are no reviews yet.