Description
ಆತ್ಮಕಥೆಯನ್ನು ಐದು ಅಥವಾ ಹತ್ತು ವರ್ಷಕ್ಕೊಮ್ಮೆ ಬರೆಯತೊಡಗಿದರೆ ಭಾಷೆಯಂತೂ ಬದಲಾಗುತ್ತದೆ, ಜೊತೆಗೆ ತನಗೇ ತಿಳಿಯದಂತೆ ಸತ್ಯದ ಸ್ವರೂಪ ಕೂಡಾ ಬದಲಾಯಿಸಬಹುದಲ್ಲವೆ? ನಾನು ಮೊದಲಿನಿಂದ ಸುಳ್ಳು ಹೇಳುತ್ತಾ ಬಂದಿದ್ದೇನೆ. ಆ ಸುಳ್ಳಿನಿಂದ ಇನ್ನೊಬ್ಬರಿಗೆ ತೊಂದರೆಯಾಗುವುದಿಲ್ಲವೆಂಬ ನನ್ನದೇ ಆದ ಭರವಸೆಯೂ ಇರುತ್ತಿತ್ತು. ಅದಕ್ಕೇ ಈ ಇಳಿ ವಯಸ್ಸಿನಲ್ಲಿ ನನಗೆ ಸುಳ್ಳು ಮತ್ತು ಸತ್ಯಗಳ ಭೇದವೇ ಮರೆತುಹೋಗಿದೆ! ನನ್ನ ಈ ದೀರ್ಘ ಜೀವನದ ಬಗೆಗೆ ‘ಉಳಿದವರು’ ಏನು ತಿಳಿದುಕೊಂಡಿದ್ದಾರೋ ಅದೇ ನನ್ನ ಕಥೆ. ಆದರೆ ಈ ಉಳಿದವರಲ್ಲಿ ನಾನೂ ಒಬ್ಬನಾಗಿದ್ದೇನೆ! ಆದ್ದರಿಂದ ವ್ಯಕ್ತಿಯ ಆತ್ಮಕಥೆ ಒಂದು ಅಧಿಕೃತವಾಣಿಯಾಗುತ್ತದೆ.
ಬಿ.ವಿ. ಕಾರಂತ
(ಆತ್ಮಕಥನಕ್ಕೆ ಬರೆದುಕೊಂಡ ಟಿಪ್ಪಣಿಗಳಿಂದ)
Reviews
There are no reviews yet.