Description
ಕವಿತೆಯಂತೆಯೇ ಇದ್ದವಳು, ನಿತ್ಯ ಜೊತೆಗಿಲ್ಲದಿದ್ದರೂ ಜೊತೆಗೇ ಇದ್ದವಳು, ‘ನಮ್ಮ ಪ್ರೀತಿಯ ಪೂರ್ಣಿಮಾ’ ಅವಳು. ಕವಿತೆಗಳನ್ನು ಬರೆದೂ ಬರೆಯದವಳಂತೆ ಪ್ರಕಟಮಾಡದೆ ಹಾಯಾಗಿ ಇದ್ದಳಲ್ಲ, ಆ ಶಕ್ತಿ ಅಂಥ ಅವಳಿಗೆ ಮಾತ್ರ. ಆದರೂ ತರವಲ್ಲವಿದು ನಿನಗೆ ಪೂರ್ಣಿಮಾ, ಪ್ರಕಟಿಸಬೇಕಿತ್ತು ಅಂತಂದರೆ ನಕ್ಕು ಮಾತು ತೇಲಿಸಿ ಮರೆಸುವ ಅವಳ ನಗೆಬಗೆ ಕಣ್ಣಿಗೆ ಕಟ್ಟುತ್ತಿದೆ. ಕಣ್ಣೆದುರಿನ ಚಿತ್ರವಾದಳು ಎಂತು ಬಂಗಾರ ಹುಡುಗಿ, ಇಷ್ಟು ಬೇಗ. ಸತ್ಯ ಮತ್ತು ನಿಜ ಕಾಲದಲೆಗಳು ನಂಬುವ ಮತ್ತು ನುಂಗುವ ಕಷ್ಟಗಳೊಡನೆ ಬಿಟ್ಟುಹೋದ ಈ ಕವನಗಳು ಉದ್ದಕ್ಕೂ ಸ್ಪರ್ಶಿಸುವ ಸಾವಧಾನದ ಹಸುಕು ಬಿಸಿನುಡಿ, ಒಳಮಾತು, ಕಾಣದಂತೆ ಆದರೆ ತಿಳಿಯುವಂತೆ ಹೊಳೆವ ಕಣ್ ತೇವ… ಓದುತ್ತ ಹೋದಂತೆ ನಿಶ್ಶಬ್ದಗೊಳಿಸುತ್ತವೆ.
-ವೈದೇಹಿ
Reviews
There are no reviews yet.