Description
ಸಮುದ್ಯತಾ ಅವರ ಸಂಪೂರ್ಣ ಗಮನವು ಹೆಣ್ಣು ಜೀವನದ ಗೂಢತೆ, ನೋಡಲು ಸ್ವತಂತ್ರ ಬದುಕು ಎನಿಸಿದರೂ ಅಗೋಚರ ಶಕ್ತಿಯೊಂದರಿಂದ ನಿಯಂತ್ರಿಸಲ್ಪಡುವ ಸ್ತ್ರೀ ಬದುಕಿನ ಅನೂಹ್ಯ ಏರಿಳಿತಗಳು, ಸದ್ದಿಲ್ಲದೆ ಅವೆರಡನ್ನೂ ಉಣ್ಣುವ ಮೇಲ್ಮಧ್ಯಮ ವರ್ಗದ ಗೃಹಿಣಿಯೊಬ್ಬಳ ಒಳ ತಾಕಲಾಟಗಳನ್ನು ಹಿಡಿದಿಡುವುದರಲ್ಲಿ ಮಗ್ನಗೊಂಡಿದೆ. ಒಂದಿಲ್ಲ ಇನ್ನೊಂದು ತೆರದಲ್ಲಿ ಅವರ ಕಾವ್ಯದ ಸ್ಥಾಯೀಭಾವವು ಈ ಗೂಢವನ್ನು ಒಡೆಯಬಯಸುವ ಸ್ತ್ರೀ ಮನವೊಂದರ ಸದ್ದಿಲ್ಲದ ಹೋರಾಟವೇ ಆಗಿದೆ… ನಿಧಾನವಾಗಿ ಬದುಕು ಇಷ್ಟೇ ಎಂಬ ಸಮಾಧಾನ ಒಂದನ್ನು ಹೊಂದುವುದನ್ನೆ ಅವರ ಕಾವ್ಯ ಬೆಂಬಲಿಸುತ್ತದೆ. ಇದು ಒಳಸರಿಯುವ ಹತಾಶೆಯೂ ಅಲ್ಲ. ಹೊರ ಜಿಗಿಯುವ ಆಧ್ಯಾತ್ಮದ ವೈಶಾಲ್ಯವೂ ಅಲ್ಲ. ಅದು ಇಹದೊಂದಿಗೆ ಪರವನ್ನು ಬೆಸೆದು ಸಮಾಧಾನ ಕಂಡುಕೊಳ್ಳುವ ಗೃಹಿಣಿ ಸಂಹಿತೆ.
ಲಲಿತಾ ಸಿದ್ಧಬಸವಯ್ಯ
ಕೊಂಕಿಲ್ಲದ, ದ್ವೇಷವಿಲ್ಲದ, ಪ್ರೀತಿಯ, ಸ್ನೇಹದ ಸಹಜ ಸ್ಪಂದನೆಯ ಹುಡುಕಾಟ ಇಲ್ಲಿರುವ ಬಹುತೇಕ ಕವನಗಳ ವಸ್ತು. ಸರಳವಾದ ಮತ್ತು ಸಹಜವಾದ ಸಂಬಂಧಗಳು ಹಾಗೂ ಕಾಳಜಿಗಳು ಮೇಲುನೋಟಕ್ಕೆ ತೀವ್ರವಾಗಿ ಕಾಣುವುದಿಲ್ಲ. ತೀವ್ರವಾಗಿ ಬದುಕಿದಾಗ ಸಾಮಾನ್ಯ ಅನುಭವಗಳು ವಿಶೇಷವಾಗಿ ಕಾಣುತ್ತವೆ. ಈ ವಿಶೇಷ ಅನುಭವಗಳನ್ನು ಹೇಳುವ ಸಾಮಾನ್ಯ ಭಾಷೆಯು ಬೇರೆ ರೀತಿಯಲ್ಲಿ ಮಾತಾಡುತ್ತದೆ.
ದೇವೇಂದ್ರ ಬೆಳೆಯೂರು





Reviews
There are no reviews yet.