ನೆನಪು ಅನಂತ

Category: , , , , ,

180.00

83 In Stock
Number of pages

160

Year of Publication

2022

Author

ಎಸ್ತರ್ ಅನಂತಮೂರ್ತಿ

Translator / Editor

ಪೃಥ್ವೀರಾಜ ಕವತ್ತಾರು

eBook

https://play.google.com/store/books/details/Esther_Ananthamurthy_Nenapu_Anantha?id=urNYEAAAQBAJ

83 in stock

Description

…ಮೇಷ್ಟ್ರು ದಿನವಿಡೀ ನಿರಂತರವಾಗಿ ಹನಿಗಡಿಯದ ವಿಚಾರಧ್ಯಾನದಲ್ಲಿದ್ದವರು. ಸದಾ ಮನೆ ತುಂಬಾ ಭೇಟಿಗೆ ಬರುವ ಜನ, ಮಾತು ಚರ್ಚೆಗಳೇ ತುಂಬಿದ್ದರೂ ಗಂಭೀರ ವಿಚಾರಗಳಾಚೆ ಒಂದು ಕ್ಷಣವೂ ಅವರು ಸಮಯ ಕಳೆದವರಲ್ಲ. ಮೇಡಂ ಇಲ್ಲಿ ಬರೆದುಕೊಂಡಂತೆ ಅವರು ಎಲ್ಲರಂತೆ ಒಬ್ಬ ಗೃಹಿಣಿ. ಪ್ರೀತಿಸಿ ಮದುವೆಯಾದ ಅವರಿಗೂ ಇಂತಹ ಜೀನಿಯಸ್ ಬರಹಗಾರ ಪತಿಯೊಡನೆ ಸಂಸಾರ ನಡೆಸುವುದು ಸರಳ ವಿಚಾರವಲ್ಲ. ಮೇಷ್ಟ್ರು ಸದಾ ಸಮಾನತೆಯ ಬುನಾದಿಯ ಮೇಲಿನ ಪ್ರಜಾಪ್ರಭುತ್ವದ ಆದರ್ಶ ಸಮಾಜದ ಕನಸುಗಾರರು. ಸಂಸಾರ ಲೌಕಿಕ ಜವಾಬ್ದಾರಿಯನ್ನು ಬೇಡುವ ವಾಸ್ತವ. ಮೇಷ್ಟರೊಡನೆ ಅವರ ಓದು ಬರಹದ ನಿರಂತರ ಧ್ಯಾನಗಳಿಗೆ ತೊಂದರೆ ಆಗದಂತೆ ಕುಟುಂಬವನ್ನು ಬೆಳೆಸಿದ ಜೀವಪ್ರೀತಿಯ ಕಥನವಿದು…

ಎಸ್.ಆರ್. ವಿಜಯಶಂಕರ

…ಪ್ರಸಿದ್ಧರ ಪತ್ನಿಯ ಏಳುಬೀಳುಗಳ ಮಾಮೂಲಿ ಕಥನವಾಗದೆ, ಏನೆಂಥ ಹೊತ್ತಿನಲ್ಲೂ ಹೆಣ್ಣಿನ ಆಯ್ಕೆ ಮತ್ತು ಆದ್ಯತೆಗಳು ಕುಟುಂಬವನ್ನು ಉಳಿಸಿ, ಬೆಳೆಸುತ್ತ, ಪೊರೆಯುವುದೇ ಆಗಿರುತ್ತವೆ ಎನ್ನುವುದನ್ನು ಈ ಕಥನ ಹೇಳುತ್ತದೆ. ಆದರೆ, ಇದು ಮಿತಿಯಲ್ಲ, ಇದಕ್ಕೂ ಕೊನೆಯಿಲ್ಲದ ತಾಳ್ಮೆ ಮತ್ತು ಶಕ್ತಿ ಬೇಕು. ಇದರಾಚೆಗೆ ಅನ್ನೋನ್ಯ ಸಖ್ಯದ ಸಂಭ್ರಮ ಮತ್ತು ಬಿಕ್ಕಟ್ಟುಗಳನ್ನೂ ಇದು ಧ್ವನಿಸುತ್ತದೆ… ಗೃಹಸ್ಥ ಧರ್ಮದ ಗಂಧ ತೇಯುವುದು ಹೆಣ್ಣಿನ ಮೂಲಧರ್ಮ ಎಂದು ಹೇಳಲಾಗುತ್ತದೆ. ಅದು ಕರಾರಲ್ಲ, ಸಾಮಾಜಿಕ ಹೇರುವಿಕೆಯ ಕಾರಣಕ್ಕಾಗಿ ಮಾತ್ರ ನಿಭಾಯಿಸುವಂಥದ್ದಲ್ಲ. ಅದನ್ನು ಹೆಣ್ಣು ತನಗೆ ಬೇಕಾಗಿ, ಕೊನೆಯಿಲ್ಲದ ಪ್ರೀತಿ ಮತ್ತು ತನ್ಮಯತೆಯಲ್ಲಿ ನಿಭಾಯಿಸುತ್ತಾಳೆ. ಅದಕ್ಕೆ ಲೋಕದ ಮನ್ನಣೆ ಈ ಕಾರಣಕ್ಕಾಗಿ ಸಲ್ಲಬೇಕು ಎಂದು ಎಸ್ತರ್ ಅವರ ಈ ನಿರೂಪಣೆ ಹೆಣ್ಣಿನ ಮೆಲುವಾಗಿಯೂ ಗಟ್ಟಿಯಾದ ವಿಶಿಷ್ಟ ಶೈಲಿಯಲ್ಲಿ ಒತ್ತಾಯಿಸುತ್ತದೆ.

ಎಂ. ಎಸ್. ಆಶಾದೇವಿ

Reviews

There are no reviews yet.

Be the first to review “ನೆನಪು ಅನಂತ”

Your email address will not be published. Required fields are marked *

You may also like…

Esther Ananthamurthy

ಶ್ರೀಮತಿ ಎಸ್ತರ್‌ ಅನಂತಮೂರ್ತಿಯವರು ಹಾಸನದಲ್ಲಿ ೧೯೪೦ ನವೆಂಬರ್‌ ೨೨ ರಂದು ಹುಟ್ಟಿದರು. ಇವರ ತಂದೆ ಆನಂದ ಕೃಷ್ಣಪ್ಪ ಮತ್ತು ತಾಯಿ ಫ್ರೀಡಾ. ಆರಂಭಿಕ ಶಿಕ್ಷಣವನ್ನು ಹಾಸನದಲ್ಲಿ ಮುಗಿಸಿ ನಂತರ ಬೆಂಗಳೂರಿನಲ್ಲಿ, ೧೯೬೦ರಲ್ಲಿ ಕಾಲೇಜು ಓದುತ್ತಿರುವಾಗ ಯು.ಆರ್‌. ಅನಂತಮೂರ್ತಿಯವರನ್ನು ಮದುವೆಯಾದರು. ಅನಂತಮೂರ್ತಿಯವರು ಕಾಮನ್‌ವೆಲ್ತ್ ಸ್ಕಾಲರ್‌ಶಿಪ್‌ ಪಡೆದು ಸಂಶೋಧನ-ಅಧ್ಯಯನಕ್ಕೆಂದು ಇಂಗ್ಲೆಂಡ್‌ಗೆ ಹೋದಾಗ ಅವರ ಜೊತೆಗೆ ಹೋದರು. ಅಲ್ಲಿ, ಬರ್ಮಿಂಗ್‌ಮ್‌ ಟೆಕ್ನಿಕಲ್‌ ಕಾಲೇಜಿನಲ್ಲಿ ಕೆಲವು ಕಾಲ ಲ್ಯಾಬ್‌ ಟೆಕ್ನೀಶಿಯನ್‌ ಆಗಿ ದುಡಿದರು. ಮೈಸೂರಿಗೆ ಮರಳಿದ ಬಳಿಕ ಶಾರದಾ ವಿಲಾಸ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪೂರ್ಣಗೊಳಿಸಿ, ನಂತರ ಬಿ.ಎಡ್‌. ಮತ್ತು ಎಂ.ಎಡ್‌ ಪದವಿಯನ್ನೂ ಪಡೆದರು. ಮೈಸೂರಿನ ರಾಯಲ್‌ ಇಂಗ್ಲಿಷ್‌ ಸ್ಕೂಲ್‌ನಲ್ಲಿ ಅಧ್ಯಾಪನ ವೃತ್ತಿಜೀವನ ಆರಂಭಿಸಿದ ಇವರು ಮುಂದೆ ಮಾನಸಗಂಗೋತ್ರಿಯ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತವನ್ನು ಹದಿನೆಂಟು ವರ್ಷ ಬೋಧಿಸಿದರು. ಅದೇ ಸಂಸ್ಥೆಯಲ್ಲಿ ಕೆಲ ಕಾಲ ಮುಖ್ಯೋಪಾಧ್ಯಾಯಿನಿಯಾಗಿ ಕೂಡ ಕೆಲಸ ಮಾಡಿದರು. ಸಂಗೀತ ಮತ್ತು ನಾಟಕಗಳಲ್ಲಿ ಆಸಕ್ತಿಯಿರುವ ಎಸ್ತರ್ ಮೈಸೂರಿನ ಸಮತೆಂತೋ ನಾಟಕ ತಂಡದ ಸಕ್ರಿಯ ಸದಸ್ಯೆಯಾಗಿ ‘ಕಾಡುಪ್ರಾಣಿ’, ‘ಆವಾಹನೆ’, ‘ತಾಯಿ’, ‘ಘಾಸೀರಾಂ ಕೋತ್ವಾಲ್‌’ ಮುಂತಾದ ನಾಟಕಗಳಲ್ಲಿ ನಟಿಸಿದರು. ಎಸ್ತರ್‌ ಅವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ ಕೆಲವು ಮಕ್ಕಳ ಪುಸ್ತಕಗಳು ಪ್ರಕಟವಾಗಿವೆ. ಪ್ರಸ್ತುತ,ಬೆಂಗಳೂರಿನಲ್ಲಿ ನೆಲೆಸಿರುವ ಇವರಿಗೆ ಇಬ್ಬರು ಮಕ್ಕಳು - ಶರತ್‌ ಮತ್ತು ಅನುರಾಧಾ.