Description
ಕನ್ನಡದ ಹಿರಿಯ ಲೇಖಕ-ಚಿಂತಕ ಡಾ. ಯು.ಆರ್. ಅನಂತಮೂರ್ತಿಯವರು ತಮ್ಮ ಬದುಕಿನ ಎಂಬತ್ತರ ದಶಕದಲ್ಲಿ ದಾಖಲಿಸಿದ ಆತ್ಮಕಥನ ಇದು. ಲೇಖಕಿ ಜ.ನಾ. ತೇಜಶ್ರೀಯವರ ಲವಲವಿಕೆಯ ನಿರೂಪಣೆಯಲ್ಲಿ ಕಥನದಂತೆ ಓದಿಸಿಕೊಳ್ಳುವ ಈ ಬರಹವು ಅನಂತಮೂರ್ತಿಯವರ ಬಾಲ್ಯ ಮತ್ತು ಓದಿನ ದಿನಗಳಿಂದ ಆರಂಭವಾಗಿ ಸಂಸಾರ, ಅಧ್ಯಾಪನ ವೃತ್ತಿ ಮತ್ತು ಸಾಮಾಜಿಕ ಚಟುವಟಿಕೆಗಳತ್ತ ಹರಿದು ಕಡೆಗೆ ಅವರ ವಿಶ್ವವ್ಯಾಪಿ ಸಂಚಾರಗಳು ಮತ್ತು ಸಾರ್ವಜನಿಕ ವಲಯದ ಹುದ್ದೆಗಳ ಅನುಭವವನ್ನು ವಿಮರ್ಶಕ ಪ್ರಜ್ಞೆಯಿಂದ ದಾಖಲಿಸುತ್ತಹೋಗುತ್ತದೆ. ಒಂದು ಕಡೆಯಿಂದ ಹಿರಿಯ ಕನ್ನಡ ಲೇಖಕನೊಬ್ಬನ ಆತ್ಮಕಥೆ, ಮತ್ತೊಂದು ಕಡೆಯಿಂದ ಇಪ್ಪತ್ತನೆ ಶತಮಾನದ ದ್ವಿತೀಯಾರ್ಧದ ಸಾಹಿತ್ಯಿಕ-ಸಾಂಸ್ಕ ತಿಕ ಚರಿತ್ರೆಯ ಅನಾವರಣ – ಹೀಗೆ ಬೇರೆಬೇರೆ ಕಾರಣಗಳಿಂದ ನಮ್ಮನ್ನ ತಟ್ಟಬಲ್ಲ ಅಪರೂಪದ ಬರಹ ಇದು.
Reviews
There are no reviews yet.