Description
…ಯಾವ ದೇಶ, ಕಾಲದ ಕವಿತೆಯು ಕೂಡ ಸಂವಹನ ಆಗೋದು, ತೀರಾ ನಿಧಾನವಾಗಿ. ಪ್ರತಿಯೊಂದು ಕವಿತೆ ಒಂದು ರಕ್ತದ ಬಾಟಲ್. ಅದನ್ನು ಕವಿಯೇ ತನ್ನದೇ ಭಾಷಿಕ ಸೂಜಿ, ನಳಿಕೆಗಳ ಮೂಲಕ ನಿಧಾನವಾಗಿ ತನ್ನ ಕವಿತೆಯಲ್ಲಿ ಸಂಗ್ರಹಿಸುತ್ತಾನೆ. ನಂತರ ಅದನ್ನು ಓದುಗ ತನ್ನ ರಕ್ತಕ್ಕೆ ಸೇರಿಸಿಕೊಳ್ಳಬೇಕು ಎನಿಸಿದರೆ ಆತನೂ ಅದನ್ನು ತನ್ನದೇ ಆದ ಸೂಜಿ, ನಳಿಕೆಗಳ ಮೂಲಕವೇ ಅಷ್ಟೇ ನಿಧಾನವಾಗಿ, ಹನಿ ಹನಿಯಾಗಿ ಒಳಗೆ ಬಿಟ್ಟುಕೊಳ್ಳಬೇಕಾಗುತ್ತದೆ. ಏನಿದ್ದರೂ ಚುಚ್ಚುವ ಸೂಜಿ ಒಳಸೇರಿಸುವ ನಳಿಕೆ, ಇವುಗಳ ಋಣಾನುಬಂಧ ಕಾರಯಿತ್ರೀಗೂ ತಪ್ಪಿದ್ದಲ್ಲ, ಭಾವಯಿತ್ರಿಗೂ ತಪ್ಪಿದ್ದಲ್ಲ. ಇಷ್ಟಕ್ಕೂ ಎಲ್ಲರ ರಕ್ತ ಎಲ್ಲರಿಗೂ ಹೊಂದುವುದಿಲ್ಲ ಅನ್ನೋ ತಾತ್ವಿಕ ಸತ್ಯವನ್ನಂತು ನಾವು ಗಮನಿಸಲೇಬೇಕಾಗುತ್ತದೆ. ನನ್ನ ಮೈಯಲ್ಲಿ ಹರಿಯುವ ರಕ್ತ ನನ್ನದಷ್ಟೇ ಅಲ್ಲ ಅನ್ನೋ ಅರಿವು, ಕಾವ್ಯ ಚರಿತ್ರೆಯ ಸಂಕರಗಳ ಸಂಕಥನಗಳ ಸಂಕಟಗಳಲ್ಲಿಯೆ ನಿಯತವಾಗಿದೆ…
(ಲೇಖಕರ ಸಂದರ್ಶನದಿಂದ ಆಯ್ದ ಮಾತುಗಳು)
Reviews
There are no reviews yet.