ಕರ್ನಾಟಕದ ಭಾಷೆಗಳು

SKU: 189
Category: , , , , , , ,

700.00

45 In Stock
Weight 690.00000000 g
Number of pages

531

Year of Publication

2017

Translator / Editor

ಜಿ.ಎನ್. ದೇವಿ, ರಾಜೇಶ್ವರಿ ಮಹೇಶ್ವರಯ್ಯ, ಹೆಚ್.ಎಂ. ಮಹೇಶ್ವರಯ್ಯ

45 in stock

Description

ಬರೋಡಾದಲ್ಲಿ ಭಾಷಾ ಸಂಶೋಧನಾ ಮತ್ತು ಪ್ರಕಾಶನ ಕೇಂದ್ರವು ೧೯೯೬ರಲ್ಲಿ ಸ್ಥಾಪಿತವಾಯಿತು. ಮೌಖಿಕ ಪರಂಪರೆಯನ್ನು ಉಳಿಸುವುದು ಹಾಗು ಅಂಚಿನಲ್ಲಿರುವ ಭಾಷೆಗಳನ್ನು ರಕ್ಷಿಸುವುದು ಇದರ ಉದ್ದೇಶವಾಗಿತ್ತು. ಈ ಸಂಸ್ಥೆಯ ಪ್ರಯತ್ನದಿಂದಾಗಿ ಭಿಲ್ಲಿ ಭಾಷಾ ಗುಂಪಿಗೆ ಸೇರಿದ ಭಾಷೆಗಳು ಬೆಳೆಯತೊಡಗಿದವು. ಆದರೆ ಅಂಚಿನಲ್ಲಿರುವ ಅನೇಕ ಭಾಷೆಗಳು ಅಧೋಗತಿಯನ್ನು ಪಡೆಯುತ್ತಲೇ ಇವೆ. ೧೯೬೧ರ ಗಣತಿಯ ಪ್ರಕಾರ ೧೬೫೨ ಮಾತೃಭಾಷೆಗಳು ಗುರುತಿಸಲ್ಪಟ್ಟಿವೆ. ಇದರಲ್ಲಿ ನೂರಾರು ಭಾಷೆಗಳು ಇಂದು ಕಣ್ಮರೆಯಾಗಿ ಹೋಗಿವೆ. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಪ್ರತಿಶತ ಇಪ್ಪತ್ತರಷ್ಟು ಭಾಷೆಗಳು ನಶಿಸಿಹೋಗಿವೆಯೆಂದು ಹೇಳಲಾಗುತ್ತಿದೆ. ಉಳಿದವುಗಳಲ್ಲಿ ಮೂರರ ಒಂದು ಭಾಗದಷ್ಟು ಈ ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ನಶಿಸಿವೆ. ಇದೇ ರೀತಿಯಲ್ಲಿ ಭಾಷೆಗಳ ಅಳಿಯುವಿಕೆ ಮುಂದುವರಿದರೆ ಬರುವ ಐವತ್ತು ವರ್ಷಗಳಲ್ಲಿ ನಮ್ಮೆಲ್ಲಾ ಬುಡಕಟ್ಟು ಹಾಗು ಅಲೆಮಾರಿ ಜನಾಂಗದ ಭಾಷೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಮಾತ್ರವಲ್ಲದೆ ಕೆಲವು ಪ್ರಮುಖ ಭಾಷೆಗಳೂ ಅಧೋಗತಿಗೆ ತಲುಪುವುದನ್ನು ನಾವು ನೋಡಬೇಕಾಗುತ್ತದೆ. ೨೦೧೦ರ ಮಾರ್ಚ್ ತಿಂಗಳಲ್ಲಿ ಭಾಷಾ ಸಂಶೋಧನಾ ಕೇಂದ್ರವು ‘ಭಾಷಾಸಂಗಮ’ ವಿಚಾರ ಸಂಕಿರಣವನ್ನು ಬರೋಡಾದಲ್ಲಿ ಏರ್ಪಡಿಸಿತ್ತು. ಅದರ ಸಮಾರೋಪ ಗೋಷ್ಠಿಯಲ್ಲಿ ಭಾರತೀಯ ಭಾಷೆಗಳ ಜನಪರಿವೀಕ್ಷಣೆ ನಡೆಸುವ ನಿರ್ಣಯವನ್ನು ತೆಗೆದುಕೊಂಡಿತು. ಭಾರತೀಯ ಭಾಷಾ ಜನಪರಿವೀಕ್ಷಣೆಯ ಈ ಕಾರ್ಯವು ಭಾರತದ ಪ್ರಪ್ರಥಮ ಪ್ರಜಾಸತ್ತಾತ್ಮಕ ಹಾಗು ಬೌದ್ಧಿಕ ಪ್ರಯತ್ನವಾಗಿದ್ದು ಇದರಲ್ಲಿ ಭಾರತದಾದ್ಯಂತ ಇರುವ ನೂರಾರು ವಿದ್ವಾಂಸರ ಹಾಗು ಸಾಮಾನ್ಯರ ಪಾಲುದಾರಿಕೆಯಿದೆ. ಕಮ್ಮಟಗಳನ್ನು ಮಾಡುವುದರ ಮೂಲಕ, ವಿಚಾರ ಸಂಕಿರಣಗಳನ್ನು ಏರ್ಪಡಿಸುವುದರ ಮೂಲಕ ಈ ಕಾರ್ಯವು ಸಾಧ್ಯವಾಗಿದೆ. ಇದರಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ವಾಂಸರು ೭೮೦ ಭಾಷೆಗಳ ಕುರಿತಾದ ಅಧ್ಯಯನ ಮಾಡಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಪುಟಗಳ ಐವತ್ತು ಸಂಪುಟಗಳನ್ನು ವಿದ್ವತ್ ಲೋಕಕ್ಕೆ ನೀಡಿದ್ದಾರೆ. ಆರಂಭದಿಂದಲೂ ಪ್ರೊ. ಜಿ.ಎನ್. ದೇವಿಯವರು ಈ ಕೈಂಕರ್ಯದ ಕರ್ಣಧಾರತ್ವವನ್ನು ವಹಿಸಿ ಇದರ ಅಧ್ಯಕ್ಷರಾಗಿದ್ದಾರೆ.

… …

ಪ್ರಸ್ತುತ ಸಂಪುಟದಲ್ಲಿ ಕರ್ನಾಟಕದಲ್ಲಿ ಇರುವ ಭಾಷೆಗಳನ್ನೆಲ್ಲಾ ಅಧ್ಯಯನಕ್ಕೊಳಪಡಿಸಿ ದಾಖಲಿಸಲು ಪ್ರಯತ್ನಿಸಲಾಗಿದೆ. ಇದು ಭಾಷಿಕ ಅಂಶಗಳನ್ನು, ವ್ಯಾಕರಣದ ನಿಯಮಗಳನ್ನು ಜೊತೆಗೆ ಭಾಷಾ ಬಳಕೆಯ ರೂಪಗಳನ್ನು ಒಳಗೊಂಡಿದೆ. ಅನೇಕ ವಿದ್ವಾಂಸರ ಹಾಗು ಸಮುದಾಯಗಳ ಸಹಾಯ-ಸಹಕಾರದೊಂದಿಗೆ ಇದನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕದ ಹೊರಗಿನ ಭಾರತೀಯರಿಗಾಗಿ ಈ ಸಂಪುಟದ ಹಿಂದಿ ಅವರತಣಿಕೆಯನ್ನು (ಸಂಪುಟ ೧೪, ಭಾಗ ೧) ಎಂದೂ, ಅಂತರ್ರಾಷ್ಟ್ರೀಯ ಓದುಗರಿಗಾಗಿ ಆಂಗ್ಲ ಅವರತಣಿಕೆಯನ್ನು (ಸಂಪುಟ ೧೪, ಭಾಗ ೨) ಎಂದೂ ಹೊರತರಲಾಗಿದೆ. ಸುಮಾರು ಇಪ್ಪತ್ತು ಸಾವಿರ ಪುಟಗಳ ಮೂರೂ ಬಾಷೆಗಳಲ್ಲಿಯ ಈ ಸಂಪುಟ ಕರ್ನಾಟಕದ ಭಾಷೆಗಳ ೧೪ನೆಯ ಸಂಪುಟವಾಗಿದೆ. ಇಷ್ಟು ವಿಸ್ತೃತವಾಗಿ ಹಾಗೂ ಇಷ್ಟು ಆಳವಾಗಿ ಈ ವಿಷಯಗಳ ಅಧ್ಯಯನ ಮತ್ತು ದಾಖಲಾತಿ ಕರ್ನಾಟಕದ ಭಾಷೆಗಳ ಬಗ್ಗೆ ಆಗುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲ ಸಲ ಎಂಬ ಹೆಮ್ಮೆ ನಮಗಿದೆ.

Reviews

There are no reviews yet.

Be the first to review “ಕರ್ನಾಟಕದ ಭಾಷೆಗಳು”

Your email address will not be published. Required fields are marked *

You may also like…

No Author Found