ಮರ ಗಿಡ ಬಳ್ಳಿ

Category: , , , ,

175.00

46 In Stock
Number of pages

108

Year of Publication

1st Edition- 1979, 2nd Edition- 2024

Author

ವೈದೇಹಿ

46 in stock

Description

ವರ್ಧಮಾನ ಲೇಖಕಿಯ ಹದಿನಾಲ್ಕು ಕಥೆಗಳ ಈ ಪ್ರಥಮ ಸಂಕಲನ ಹಲವು ಕಾರಣಗಳಿಗಾಗಿ ಗಣ್ಯವೆನಿಸುತ್ತದೆ. ಹಲವು ವರ್ಷಗಳಲ್ಲಿ ಬರೆದ ಈ ಹದಿನಾಲ್ಕು ಕಥೆಗಳು, ಅತ್ಯಂತ ಪ್ರಾಮಾಣಿಕವಾದ ಅನಾತುರದ ದೃಢ ಹೆಜ್ಜೆಗಳಲ್ಲಿ ಲೇಖಕಿ ಬಹು ಸಹಜವಾಗಿ ಬೆಳೆಯುತ್ತ ಬಂದುದನ್ನು ಸ್ಫುಟವಾಗಿ ಮನಗಾಣಿಸಿಕೊಡುತ್ತವೆ. ಅನುಭವಗಳನ್ನು ಕಥಾರೂಪದಲ್ಲಿ ಹರಳುಗಟ್ಟಿಸಿಕೊಳ್ಳುವ ಪ್ರಯತ್ನದ ಜತೆಜತೆಗೇ, ಕಥೆಕಟ್ಟುವ ಚಾತುರ್ಯಕ್ಕೇ ಬಲಿಗೊಟ್ಟುಕೊಳ್ಳದೆ, ಕಥೆಯ ಸೆರೆಯಿಂದ ಬಿಡಿಸಿಕೊಳ್ಳಲೂ ಹವಣಿಸುವಂಥ ಬಿಗುಪಿನ ಹದ; ತನ್ನದೇ ಸಾಚಾ ಅನುಭವಗಳನ್ನು, ಇವು ಕ್ಷುಲ್ಲಕವೆನಿಸಿಯಾವೋ ಎಂಬ ಸಂದೇಹ ಸಂಕೋಚಗಳಿಂದ ಬಾಧಿತವಾಗದೆ, ನಿಷ್ಠೆಯಿಂದ ಆಧರಿಸುವ ಹಾಗೂ ಈ ಸ್ವಂತಿಕೆಯ ಮಿತಿಯಲ್ಲೇ ತನ್ನತನವನ್ನು ಮೀರಿಕೊಳ್ಳಲು ಪ್ರಯತ್ನಿಸುವ ಸೃಜನಪ್ರಜ್ಞೆ – ಮುಂತಾಗಿ ಹಲವು ಅಪರೂಪದ ಗುಣಗಳ ಬೆಳವಣಿಗೆಯನ್ನು ಈ ಸಂಕಲನದಲ್ಲಿ ಕಾಣಬಹುದು. ಇಲ್ಲಿನ ಕಥೆಗಳ ಮಂದ್ರಶ್ರುತಿಯ ಸೊಬಗು ಗದ್ದಲವಿಲ್ಲದೆ ಸೆಳೆಯುವಂಥದು.

ಕೆ. ವಿ. ಸುಬ್ಬಣ್ಣ

Reviews

There are no reviews yet.

Be the first to review “ಮರ ಗಿಡ ಬಳ್ಳಿ”

Your email address will not be published. Required fields are marked *