Description
ತಂಗಿ ಸಾವಿತ್ರಮ್ಮನಿಂದ ಅಕ್ಕ ಮಾಂಕಾಳಮ್ಮನಿಗೆ ಪತ್ರಮಾಲೆ
೧೯೩೦ರಿಂದ ೧೯೯೦ರವರೆಗಿನ ಕಥನಗಳು
ಮಲೆನಾಡು ಎಂದರೆ ತಕ್ಷಣ ಬರುವುದು ಕಾಡು, ಕುವೆಂಪು ನೆನಪು. ಮುಂದೆ ಎಂ ಕೆ ಇಂದಿರಾ ನೆನಪು. ಇಲ್ಲಿಯೋ, ಆ ಕಾಡು ಮಲೆಗಳ ವಿಸ್ತರಣೆ ಇಲ್ಲ, ಜೀರುಂಡೆಗಳ ಸದ್ದಿಲ್ಲ, ಸಂತಧಾರೆ ಮಳೆಗಳ ನಿನಾದವಿಲ್ಲ, ಹಕ್ಕಿ ಕಲರವವಿಲ್ಲ, ಜುಳುಜುಳು ಅಬ್ಬಿಯೂ ಇಲ್ಲ. ಇಲ್ಲಿರುವುದು ಆ ಎಲ್ಲದರ ಮಡಿಲಲ್ಲಿ ಮಾತಿಲ್ಲದೆ ಮೌನವೂ ಇಲ್ಲದೆ ನೆಲೆಸಿಕೊಂಡೇ ಇರುವ ಜೀವಧ್ವನಿ. ಆ ಎಲ್ಲದರೊಂದಿಗೆ ಭಿನ್ನ ಕಾಣದಂತೆ ಬೆರೆತು ನಾಲ್ಕು ಗೋಡೆಯ ಮಿತಿಯೊಳಗೇ ಬಾಹ್ಯದ ಅರಿವನ್ನೂ ಮೈಗೂಡಿ ಉದ್ಭವಗೊಂಡ ಅಂತರಾಳದ ಸಹಜ ಗೀತ. …ಅಕ್ಕನೊಂದಿಗೆ ನಡೆದ ಈ ಏಕಮುಖಿ ಮಾತುಗಾರಿಕೆ ಕಥನರೂಪ ತಾಳಿರುವುದೇ ಒಂದು ದೊಡ್ಡ ವಿಶೇಷ. ತನ್ನ ಬಗ್ಗೆ ಹೇಳಿಕೊಳ್ಳಲು ಬರೆದ ಕಥನಕ್ಕಿಂತ ಇದು ಎಲ್ಲರನ್ನೂ ಎಲ್ಲವನ್ನೂ ನೆನೆಯುವ ಕಥನವಾಗಿ ವಿಶಿಷ್ಟ. ಇದು ತಂಗಿಯೊಬ್ಬಳು ತಾನು ದಾಟಿ ಬಂದ ದಿನಗಳ ಬದುಕನ್ನು ಎದುರು ಇರಿಸಿಕೊಂಡು ಈಗ ವರ್ಷ ಅರ್‍ವತ್ತರ ಆಸುಪಾಸಿನಲ್ಲಿ ಸ್ಮರಣೆ ವಿಸ್ಮರಣೆಗಳ ನಡುವೆ ಆಚೆಗೀಚೆಗೆ ತುಯ್ಯುತ್ತ ತನಗೆ ಪ್ರಿಯಳಾದ ಒಡಹುಟ್ಟೂ ತನ್ನ ಆರಾಧ್ಯ ಚೇತನವೂ ಆದ ಅಕ್ಕನೊಂದಿಗೆ ಮನಸ್ಸಿನಲ್ಲೇ ನಡೆಸಿದ ಏಕಮುಖ ಸಂಭಾಷಣೆ; ಹಾಗೆ ತೋರುವ ಸ್ವಗತ; ಹಾಗೆ ಕಾಣುತ್ತಲೇ ಅಕ್ಕ ಲಕ್ಷ್ಮಿಯೊಡನೆ ನಡೆದ ಆತ್ಮಸಂವಾದ. ಸಂವಾದದ ಮೂಲಕ ನಡೆದ ನಿವೇದನೆ.
– ವೈದೇಹಿ (ಮುನ್ನುಡಿಯಿಂದ)
Reviews
There are no reviews yet.