Description
ಈ ಕಥನವು ಘಟಿಸುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಕರಾವಳಿಯ ಈ ಜಿಲ್ಲೆಯಲ್ಲಿ ಹಲವು ನದಿಗಳು ಹರಿದು ಸಮುದ್ರ ಸೇರುತ್ತವೆ. ನದಿಯು ಸಮುದ್ರವನ್ನು ಸೇರುವ ತಾಣವು ದೂರದಿಂದ ಶಾಂತ ಮನೋಹರವಾಗಿ ತೋರಿದರೂ, ಆ ಅಳಿವೆಯ ನಡುವೆ ಹೋಗಿ ನೋಡಿದಾಗಲೇ ನದಿಯು ಸಾಗರವನ್ನು ಸೇರುವಾಗಿನ ಕೋಲಾಹಲ ಕಾಣುವುದು. ಅಂತೆಯೇ ಬದಲಾವಣೆಯೊಡನೆ ಸೆಣಸುತ್ತಿರುವ ಇಲ್ಲಿಯ ಜೀವನವೂ.
ಈ ಕಥನದಲ್ಲಿ ಎಷ್ಟೊಂದು ವಿವರಗಳು, ಎಷ್ಟೊಂದು ಪಾತ್ರಗಳು ಮತ್ತು ಸಂಬಂಧಗಳು ಹಾಗೂ ಇವಕ್ಕೆ ಯೋಗ್ಯವಾದ ಪದಸಂಪತ್ತು ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ತಾನು ಹುಟ್ಟಿ ಬೆಳೆದ ಪರಿಸರವನ್ನು ಗಾಢವಾಗಿ ಪ್ರೀತಿಸುವ ಲೇಖಕನಿಗೆ ಮಾತ್ರವೇ ಇದು ಸಾಧ್ಯವಾಗುವುದು. ಜೇಡ ತನ್ನ ಜಾಲವನ್ನು ತನ್ನೊಳಗಿನ ನೂಲಿನಿಂದಲೇ ನೇಯ್ದಂತೆ ನೇಯ್ದ ಕೃತಿ ಇದು.
ಕೆ.ವಿ. ತಿರುಮಲೇಶ
ಇದು ಸಾಮಾನ್ಯ ಮನುಷ್ಯರ ಸಾಮಾನ್ಯ ಕಥೆ. ಪ್ರತಿಯೊಬ್ಬರೂ ತಮ್ಮ ಸಾಮಾನ್ಯತೆಯನ್ನು ಮೀರುವ ಹಂಬಲದಲ್ಲಿಯೇ ಇರುವುದರಿಂದ ಮತ್ತು ಯಾರ ಜೀವನದಲ್ಲಿಯೂ ಹೇಳಿಕೊಳ್ಳುವಂತದ್ದು ಏನೂ ನಡೆಯದೇ ಇರುವುದರಿಂದ, ಅದರ ಅಸಾಧಾರಣ ಸೂಕ್ಷ್ಮ ದಾಖಲಾತಿ ಸಾಧ್ಯವಾಗಿರುವುದು ಈ ಕೃತಿಯ ಹಿರಿಮೆ.
ಗುರುಪ್ರಸಾದ ಕಾಗಿನೆಲೆ
Reviews
There are no reviews yet.